ಕುಟುಂಬದಿಂದ ವ್ಯವಹಾರದವರೆಗೆ, ನಿಮ್ಮ ಬದಲಾಗುತ್ತಿರುವ ಅಗತ್ಯಗಳನ್ನು ಗಮನದಲಿಟ್ಟುಕೊಂಡು ಮಲ್ಟಿಕ್ಸ್ ನಿರ್ಮಿಸಲಾಗಿದೆ. ಇದು ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಇದರ X-ಪೋರ್ಟ್ TM ವಿಶೇಷತೆಯು ವಿದ್ಯುತ್ ಉತ್ಪಾದಿಸುತ್ತದೆ. ವ್ಯವಹಾರದಾರನ ಜೀವನದ ಅವಶ್ಯಕತೆಗೆ ಅನುಗುಣವಾಗಿ ಅಭೂತಪೂರ್ವ ಹೊಂದಿಕೊಳ್ಳುವಿಕೆ ಮತ್ತು ಉದ್ದೇಶಗಳನ್ನು ಈಡೇರಿಸುವ ಸಾಮರ್ಥ್ಯ ಹೊಂದಿರುತ್ತದೆ. ಈ ವಿಭಾಗದಲ್ಲಿ ಇಂತಹದ್ದು ಇದೇ ಮೊದಲು. ಇದು ಆಟವನ್ನೇ ಬದಲಾಯಿಸುವಂತಹದ್ದು. ಇದು ಹೊಸ 3 ಇನ್ 1.

ಕುಟುಂಬ

5 ಜನರ ಕುಟುಂಬವೊಂದು ಮಲ್ಟಿಕ್ಸ್ ಆರಾಮವಾಗಿ ಕುಳಿತುಕೊಳ್ಳಬಹುದು. ಕಠಿಣ ರಸ್ತೆಗಳಲ್ಲಿಯೂ ಅರಾಮವಾಗಿ ಸಾಗುತ್ತದೆ. ನಿಮ್ಮ ಪ್ರೀತಿ ಪಾತ್ರರನ್ನು ಸುರಕ್ಷಿತವಾಗಿರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊಸ ಬಗೆಯಲ್ಲಿ ಕುಟುಂಬದ ಜೊತೆ ರಜೆ ಕಳೆಯಲು, ಹೊರಗೆ ಹೋಗಲು, ರೋಡ್ ಟ್ರಿಪ್ ಗಳಿಗೆ ಸಿದ್ಧರಾಗಿರಿ.

ಬಿಜಿನೆಸ್

ನಿಮ್ಮ ವ್ಯವಹಾರದ ಸಾಮಾಗ್ರಿಗಳನ್ನು ಸಾಗಿಸಲು ಸಾಕಷ್ಟು ಸ್ಥಳಾವಕಾಶವನ್ನು ಮಲ್ಟಿಕ್ಸ್ ಒದಗಿಸುತ್ತದೆ. ದಾಖಲೆಯ ಮೂರು ನಿಮಿಷದಲ್ಲಿ ಸೀಟ್ ಗಳನ್ನು ಹಿಂದೆ ಮಡಚಿ, ನಿಮಗೆ ಏನೂ ಬೇಕೋ ಅದನ್ನು ಸಾಗಿಸಲು ಸ್ಥಳಾವಕಾಶ ಸಿಗುತ್ತದೆ. ಮಲ್ಟಿಕ್ಸ್ ಕೆಲಸ ಆಗುವಂತೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿದೆ.

ಪವರ್

X - ಪೋರ್ಟ್ ವಿಶೇಷತೆಯೊಂದಿಗೆ,TM ಮಲ್ಟಿಕ್ಸ್ 3 ಕಿಲೋವ್ಯಾಟ್ನಷ್ಟು ವಿದ್ಯುತ್ ಉತ್ಪಾದಿಸುತ್ತದೆ. ಇದು ಮನೆಯನ್ನು ಬೆಳಗಿಸಲು, ಮ್ಯೂಸಿಕ್ ಸಿಸ್ಟಮ್, ಕೃಷಿ ಯಂತ್ರ ಮತ್ತು ಇನ್ನಿತರ ಅಗತ್ಯ ಯಂತ್ರಗಳನ್ನು ನಡೆಸಲು ಸಾಕು. ಇದರ ಫಲಿತಾಂಶ? ಸರ್ವತೋಮುಖತೆ. ಉಪಯುಕ್ತತೆ. ವಿದ್ಯುತ್!

 

Rotate back to portrait mode.